Complaint ಕೊಂಡ-ಬೆಂಕಿ...! ಕಾರಣ..?

  • Samyuktha Karnataka Contact Number - ಕೊಂಡ-ಬೆಂಕಿ...! ಕಾರಣ..?
    ಶಿವಕುಮಾರ್ ಬ್ರಹ್ಮಣೀಪುರ on 2018-04-29 18:33:31

    ರವರಿಗೆ:
    ಸಂಪಾದಕರು,
    ದಿನಪತ್ರಿಕೆ,
    ಬೆಂಗಳೂರು.
    ಇಂದ:
    ಶಿವಕುಮಾರ್ ಬ್ರಹ್ಮಣೀಪುರ,
    ನಂ. ೨೨೯೧, ಪ್ರಶಾಂತಿಭವನ,
    ಮೈಸೂರು ಬ್ಯಾಂಕ್ ಎದುರು, ಕುವೆಂಪುನಗರ
    ಚನ್ನಪಟ್ಟಣ, ರಾಮನಗರ ಜಿಲ್ಲೆ.
    "ಪ್ರಕಟಣೆಯ ಕೃಪೆಗಾಗಿ"

    ಕೊಂಡ-ಬೆಂಕಿ...! ಕಾರಣ..?

    ಇತ್ತೀಚೆನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವಂತ ದೇವರ ಕೊಂಡಕ್ಕೆ ಕೊಂಡ ಹಾಯುವಂತಹ ಪೂಜಾರಿಗಳು ಕೊಂಡಕ್ಕೆ ಬಿದ್ದು ತೀವ್ರತರವಾಗಿ ಗಾಯಗೊಳ್ಳುತ್ತಿರುವುದು, ಮರಣ ಹೊಂದುತ್ತಿರುವುದು ತುಂಬಾ ಶೋಚನೀಯವಾದ ವಿಷಯವಾಗಿದೆ. ಕೊಂಡ ಹಾಯುವ ಪೂಜಾರಿಗಳು ಕೊಂಡದ ಮಧ್ಯದಲ್ಲಿ ಎಡಗಿ ಬೀಳಲು ವೈಜ್ಞಾನಿಕ ಕಾರಣಗಳೇನೆಂದರೆ ಪೂಜಾರಿ ಕೊಂಡ ಹಾಯುವ ಹಿಂದಿನ ದಿವಸ ಒಂದು ದಿವಸ ಕೆಲವು ಕಡೆ ಎರಡು ದಿವಸ ಉಪವಾಸವಿರುವುದು. ಮತ್ತು ಪೂಜಾರಿಗಳು ಪ್ರತಿಷ್ಟೆಗಾಗಿ ರೇಷ್ಮೆ ಹಾಗೂ ನೈಲಾನ್ ಯುಕ್ತ ವಸ್ತ್ರ ತೊಡುವುದು. ಹೀಗೆ ಬಹುತೇಕವಾಗಿ ಬೇಸಿಗೆಯಲ್ಲಿಯೇ ನಡೆಯುವ ಕೊಂಡೋತ್ಸವದಲ್ಲಿ ದಿನವಿಡೀ ಉಪವಾಸವಿರುವ ಪೂಜಾರಿ ನಿಶ್ಯಕ್ತನಾಗಿದ್ದು ಸಹಜವಾಗಿ ಬೆಂಕಿಯ ಜ್ವಾಲೆಗೆ ಶಕ್ತಿ ಕುಂದಿ ನಡೆಯಲಾಗದೇ ಎಡವಿ ಬೀಳುವುದು ಸಹಜ. ಆದುದರಿಂದ ದೇವರ ಹೆಸರಿನಲ್ಲಿ ಕೊಂಡೋತ್ಸವ ನಡೆಸುವುದು ತಪ್ಪಲ್ಲ ಅದು ಸತ್ಸಂಪ್ರದಾಯ. ಆದರೆ ಕೊಂಡ ಹಾಯುವ ಪೂಜಾರಿಗೆ ಹಿಂದಿನ ಒಂದು ವಾರ ಶಕ್ತಿಯುತ ಆಹಾರ ನೀಡುವುದು ಆ ಗ್ರಾಮದ ಸಾರ್ವಜನಿಕರ ಸಾಮೂಹಿಕ ಕೆಲಸವಾಗಬೇಕು. ಮತ್ತು ರೇಷ್ಮೆ ಹಾಗೂ ನೈಲಾನ್ ವಸ್ತ್ರಗಳು ಬೇಗ ಬೆಂಕಿಯ ಜ್ವಾಲೆಗೆ ಒಳಗಾಗುವುದರಿಂದ ಅನಾಹುತಗಳಾಗುತ್ತವೆ. ಆದ್ದರಿಂದ ಕೊಂಡೋತ್ಸವದಲ್ಲಿ ಪಾಲ್ಗೊಳ್ಳುವ ದೇವರ ಪೂಜಾರಿ ಕಡ್ಡಾಯವಾಗಿ ಹತ್ತಿ ವಸ್ತ್ರ ತೊಡುವಂತೆ ಸ್ಥಳೀಯರು ಪೂಜಾರಿಯ ಮನ ಒಲಿಸವುದರ ಮೂಲಕ ಕೊಂಡೋತ್ಸವದಲ್ಲಿ ನಡೆಯುವ ಬೆಂಕಿಯ ಅನಾಹುತಗಳನ್ನು ಸುಲಭವಾಗಿ ತಪ್ಪಿಸಬಹುದು.

    ಶಿವಕುಮಾರ್ ಬ್ರಹ್ಮಣೀಪುರ
    ಚನ್ನಪಟ್ಟಣ ತಾಲ್ಲೂಕು.