Complaint Legal services. (Guidance)

  • L.S. Tejasvi Surya Contact Details, Address, Phone Number, Email ID, Website, Office - Legal services. (Guidance)
    Dr. Nanda on 2022-02-02 13:47:14

    ಸುಪ್ರಭಾತ ಸರ್.
    ನಾನು ನಂದ ಪೀ ಇ.ಎಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ. ನಮ್ಮ ತಂದೆಯವರ ಮನೆಯೊಂದನ್ನು ಬಾಡಿಗೆಗೆ ಕೊಟ್ಟಿದ್ದು(dummy document to occupy our home) ಕಾರಣಾಂತರಗಳಿಂದ (ಅಕ್ಕ ತಮ್ಮಂದಿರ ಕಲಹದಿಂದ) ಅದನ್ನು ನಕಲು ಪ್ರತಿ ಮಾಡಿಸಿದೆವು ಅದಕ್ಕೆ ಸಹಾಯ ಮಾಡಿದ ವಕೀಲರೊಬ್ಬರು ಮನೆಯನ್ನು ತಾವೇ ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಕಾರಣವೆಂದರೆ ವಾಸವಾಗಿರುವ (ಪತ್ರಕ್ಕೆ ಅನುಗುಣವಾದ ಹೆಸರು ಹಾಗೂ ವಿಳಾಸ, ಯಾರು ವಾಸವಿಲ್ಲ) ವ್ಯಕ್ತಿ ಪರಿಶಿಷ್ಟ ಜಾತಿಗೆ ಸೇರಿರುವುದರಿಂದ ಸರ್ಕಾರವಾಗಲಿ ಪೊಲೀಸ್ ಇಲಾಖೆಯಾಗಲಿ ಅವರನ್ನು ಬಿಡಿಸುವಂತೆ ಇಲ್ಲ. ಆದರೆ ಸುಮಾರು ಎರಡು ವರ್ಷಗಳಿಂದ ಬಾಡಿಗೆಯೂ ಇಲ್ಲ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ ನೀರಿನ ಬಿಲ್ ಪಾವತಿ ಮಾಡಿಲ್ಲ ಮನೆಯಲ್ಲಿ ವಾಸವೂ ಇಲ್ಲ ನೆಪಮಾತ್ರಕ್ಕೆ ನಮ್ಮ ಮನೆಯನ್ನು ಬೀಗ ಹಾಕಿ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದಾರೆ ನಮ್ಮ ತಂದೆಯ ಆಸ್ತಿ ಇನ್ನು ನಮಗೆ ವರ್ಗಾವಣೆ ಆಗಿಲ್ಲ. ನಾವು ನಾಲ್ಕು ಜನ ಮಕ್ಕಳು. ಹಾಗಾಗಿ ಇದನ್ನು ಬಿಡಿಸಿಕೊಳ್ಳುವ ಮಾರ್ಗವನ್ನು ದಯವಿಟ್ಟು ಸೂಚಿಸಿ ದರೆ ಬಹಳ ಸಹಾಯವಾಗುತ್ತದೆ ನಮ್ಮ ತಂದೆ-ತಾಯಿ ಬಾಳಿಬದುಕಿದ ಮನೆ ಇಂದು ಪಾಳುಬಿದ್ದ ನೆಲವಾಗಿದೆ. ನಾನು ಮಂಜುಳಾರವರಿಗೂ ಹಾಗೂ ರವಿಸುಬ್ರಹ್ಮಣ್ಯ ರವರಿಗೂ ಸಾಕಷ್ಟು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನೆರವಾಗಿದ್ದೇನೆ ಅದಮ್ಯ ಚೇತನದ ಕಾರ್ಯಚಟುವಟಿಕೆಗಳನ್ನು ಸಾಕಷ್ಟು ಬರವಣಿಗೆ ಕೆಲಸವನ್ನು ತೇಜಸ್ವಿನಿ ಮಾಡಂರವರಿಗೆ ಮಾಡಿ ಕೊಟ್ಟಿದ್ದೇನೆ ದಯಮಾಡಿ ನನಗೆ ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿ.
    ವಂದನೆಗಳೊಂದಿಗೆ,
    ಧನ್ಯವಾದಗಳು
    ಡಾ. ನಂದ ಕನ್ನಡ ಪ್ರಾಧ್ಯಾಪಕಿ
    ಪಿಇಎಸ್ ವಿಶ್ವವಿದ್ಯಾಲಯ.