Complaint SSF SYS ಸುಳ್ಯ ಇದರ ಒಂದು ನೋಟ

  • Karnataka Chief Minister Contact Number, Office Address, Email ID and More - SSF SYS ಸುಳ್ಯ ಇದರ ಒಂದು ನೋಟ
    Abdulla on 2020-03-27 22:33:06

    *ಕೊರೋನ ಬೀತಿಯಿಂದ ಬಳಲುತ್ತಿರುವ ಜನರೆಡೆಗೆ ನೆರವಾಗಿ ನಿಂತ SSF SYS*ಸುಳ್ಯ ತಂಡ*
    ದಿನ ಕೂಲಿ ಕೆಲಸ ಮಾಡಿ ಜೀವನ ಮುಂದೂಡುತ್ತಿದ್ದ ಜನರಿಗೆ ಕೆಲಸ ವಿಲ್ಲದೆ ಮನೆಯಲ್ಲಿ ಕುಳಿತಿರಬೇಕಾದ ಪರಿಸ್ಥಿತಿ ಬಂದಾಗ ಮೂರು ಹೊತ್ತಿನ ಊಟಕ್ಕೆ ಕಷ್ಟ ಪಡಬೇಕಾದ ಕರಾಳವು ಎದುರಾಯಿತು‌. ಏನು ಮಾಡಬೇಕೆಂದು ದಿಕ್ಕು ತೋಚದೆ ಕಂಗಾಲಾಗಿಬಿಟ್ಟರು ಬಡಪಾಯಿ ಜನ. ಅತ್ಯಾವಶ್ಯಕ ಸಂದರ್ಭ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಲು ಕೂಡ ಅನುಮತಿ ಇಲ್ಲದಂತೆ ಕಟ್ಟುಬಿದ್ದಂತ ಈ ಸಂದರ್ಭ. ರೋಗಿಗಳಿಗೆ ರಕ್ತ ನೀಡಲು ನೆರವಾಗಿದ್ದ ರಕ್ತದಾನ ಶಿಬಿರಗಳು ಕೂಡ ಮೊಟಕು ಗೊಂಡು ರೋಗಿಗಳಿಗೆ ರಕ್ತಕ್ಕಾಗಿ ಆಸ್ಪತ್ರೆಯಲ್ಲಿ ಪರದಾಡಬೇಕಾದ ಕಠೋರ ಸಂದರ್ಭವು ಎದುರಾದಾಗ.
    ಈ ಎಲ್ಲಾ ವೇದನಾ ಸಮಯದಿ ನೆರವಾಗಿ ನಿಂತ ಎಸ್ ಎಸ್ ಎಫ್, ಎಸ್ ವೈ ಎಸ್ ಸುಳ್ಯ ಡಿವಿಷನ್. ಕಷ್ಟಕ್ಕೀಡಾದವರಿಗೆ ಸಹಾಯ ಹಸ್ತ ಚಾಚುತ್ತಾ, ಊಟಕ್ಕಾಗಿ ಕಷ್ಟಕ್ಕೀಡಾದ ಜನರಿಗೆ ಉಪಹಾರಗಳನ್ನು ತಲುಪಿಸುತ್ತಾ, ಸಂಚಾರಕ್ಕಾಗಿ ಆಂಬುಲೆನ್ಸ್ ಮೂಲಕ ಸಂಚಾರ ವ್ಯವಸ್ಥೆ ಮಾಡುತ್ತಾ, ಎಸ್ಸ್ ಎಸ್ಸ್ ಎಫ್ ದ.ಕ ಜಿಲ್ಲಾ ಬ್ಲಡ್ ಸೈಬೋ ಕೆಳ ಘಟಕಗಳಿಗೆ ನೀಡಿದ ಮಾಹಿತಿಯಂತೆ ಎಸ್ ಎಸ್ ಎಫ್ ಬ್ಲಡ್ ಸೈಬೋ ಉಸ್ತುವಾರಿ ಗಳ ನಾಯಕತ್ವದಲ್ಲಿ ಆಸ್ಪತ್ರೆಗಳಲ್ಲಿ ರಕ್ತ ಬೇಕಾದ ತುರ್ತು ಸಂದರ್ಭಗಳಲ್ಲಿ ರಕ್ತದಾನಿಗಳು ರಕ್ತ ಗಳನ್ನು ನೀಡುತ್ತಾ ( ಮರ್ಚ್ ೨೪ ರಂದು ಇಪ್ಪತ್ತರಷ್ಟು ದಾನಿಗಳು ರಕ್ತ ನೀಡಿದ್ದಾರೆ ) ಎಲ್ಲಾ ಸಮಯದಿಯೂ ಸಹಾಯಕರಾಗಿ ಬೆನ್ನೆಲುಬಾಗಿ ನಿಂತ ಸಂಘಟನೆಯು.
    ಎಲ್ಲಾ ರೀತಿಯಲ್ಲೂ ಸಹಾಯಿಕರಾಗಿ ನಿಂತ ಸಂಘಟನೆಯಾ ಎಲ್ಲಾ ಮುಂದಿನ ಪಯಣದಲ್ಲಿ ತಮ್ಮ ಸಹಕಾರವನ್ನು ಕೋರುತ್ತೇವೆ